ಕನ್ನಡ ಬಲ್ಲ ಪ್ರಜಾ ಸದಸ್ಯರಿಗೆ ಒಂದು ಸಂತಸದ ಸುದ್ದಿ. ಇಂದಿನಿಂದ ಪ್ರಜಾದಲ್ಲಿ ಕನ್ನಡ ಇಂಟರ್ ಫೇಸ್ ಅನ್ನು ಪ್ರಾಯೋಗಿಕವಾಗಿ ಒದಗಿಸುತ್ತಿದ್ದೇವೆ. ಕನ್ನಡದಲ್ಲಿ ಬರೆಯುವ ಸೌಲಭ್ಯ ಪ್ರಜಾದಲ್ಲಿ ಮೊದಲಿನಿಂದಲೇ ಇದ್ದರೂ, ಇಂದಿನಿಂದ ಸದಸ್ಯರು ಹಲವಾರು ಲಿಂಕ್ ಗಳನ್ನೂ, ಆಯ್ಕೆಗಳನ್ನೂ ಕನ್ನಡದಲ್ಲಿಯೇ ನೋಡಬಹುದು.
ಇದಲ್ಲದೇ, ಇಂಗ್ಲೀಷ್ ನಲ್ಲಿ ಇರುವ ಲೇಖನಗಳನ್ನು ಕನ್ನಡಕ್ಕೆ (ಅಥವಾ ಕನ್ನಡದಿಂದ ಇಂಗ್ಲೀಷಿಗೆ) ಭಾಶಾಂತರ ಕೂಡ ಮಾಡಬಹುದು. ಭಾಶಾಂತರ ಮಾಡಲು ಆಸಕ್ತಿ ಇರುವ ಸದಸ್ಯರು tech 'at' praja.in ಗೆ ಮೈಲ್ ಮಾಡಿದರೆ ಸೂಕ್ತ ಅನುಮತಿಯನ್ನು ಕೊಡಲಾಗುವುದು.
ಪ್ರಜಾವನ್ನು ಕನ್ನಡದಲ್ಲಿ ನೋಡಲು ಇಲ್ಲಿ ಹೋಗಬಹುದು.
ಕನ್ನಡದಲ್ಲಿ ಬರೆಯಲು ಸಹಾಯ ಇಲ್ಲಿದೆ. ಕನ್ನಡ ಅಕ್ಷರಗಳು ಸರಿಯಾಗಿ ಕಾಣಿಸದೇ ಇದ್ದರೆ ಇಲ್ಲಿರುವ ಸಹಾಯವನ್ನು ಬಳಸಬಹುದು.
ಕನ್ನಡದಲ್ಲೂ ಬ್ಲಾಗ್/ಕಮೆಂಟ್ ಗಳನ್ನು ಬರೆದು, ಉತ್ತಮ ಇಂಗ್ಲೀಷ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿ, ಪ್ರಜಾದಲ್ಲಿ ಕನ್ನಡ ಸೌಲಭ್ಯವನ್ನು ಬಳಸುವ ಜವಾಬ್ದಾರಿ ನಮ್ಮೆಲ್ಲರದು.
ಕನ್ನಡ ಸರಿಯಾಗಿ ಬರದೇ ಇದ್ದರೆ ಅಥವಾ ಇಂಟರ್ ಫೇಸ್ ಭಾಷಾಂತರಕ್ಕೆ ಉತ್ತಮ ಸಲಹೆಗಳು ಇದ್ದರೆ ಇಲ್ಲಿ ಪ್ರತಿಕ್ರಿಯೆ ಹಾಕಿ ತಿಳಿಸಿ.
ಸೂಚನೆ: ತಾಂತ್ರಿಕ ಕಾರಣಗಳಿಂದ ಕನ್ನಡದ ಕೆಲವು ಪ್ರತ್ಯಯಗಳು ಸರಿಯಾಗಿ ಮೂಡುತ್ತಿಲ್ಲ (ಉದಾ: ಈ ಪುಟ ಅನ್ನು ಸ್ನೇಹಿತರಿಗೆ ಕಳಿಸಿ). ಈ ದೋಷಗಳನ್ನು ಮುಂದೆ ಸರಿಪಡಿಸಲಾಗುವುದು.
ಪ್ರತಿಕ್ರಿಯೆಗಳು
GREAT- Praja.in/Tech team - nimage mallige moggina haara*
* transliteration:
A huge Garland of Jasmine for you.
ಪ್ರಜೆಗಳೆಲ್ಲರಿಗೂ ಕನ್ನಡಮ್ಮನ ಆಶೀರ್ವಾದಗಳು ದೊರಕಿವೆ.
ಕನ್ನಡದ ಕ೦ಪು ಪ್ರಜಾಗಳಿಗೂ ಸಹ ಪಸರಿಸಿರುವುದು ಬಹಳ ಹರ್ಷ ತ೦ದಿದೆ. ಈ ಸುದಿನಕ್ಕಾಗಿ ಕನ್ನಡಿಗರು ಹಾತೊರೆಯುತ್ತಿದ್ದರು ಎನ್ನುವುದರಲ್ಲಿ ಸ೦ಶಯವಿಲ್ಲ. ಈ ಸ೦ತೋಷವನ್ನು ಕನ್ನಡೇತರರೂ ಸಹ ಹ೦ಚಿಕೊಳ್ಳುವರೆ೦ದು ಹಾರೈಸೋಣ. ಮತ್ತೊ೦ದು ಸಮಾಧಾನದ ವಿಷಯವೆ೦ದರೆ, ನಮ್ಮ ಪ್ರಜಾ.ಇನ್ ಮೂಲಕವಾದರೂ ಕನ್ನಡೇತರರಿಗೆ ನಮ್ಮ ಸು೦ದರ, ಸುಲಲಿತ ಮತ್ತು ಸುಮಧುರ ಕನ್ನಡ ಭಾಷೆಯನ್ನು ಕಲಿಸಬಹುದಾದ ಅವಕಾಶ ದೊರೆತಿದೆ.
ಪ್ರಜಾಗಳಲ್ಲಿ ಬಹಳಷ್ಟು ಮ೦ದಿ ಕನ್ನಡಿಗರೂ ಮತ್ತು ಕನ್ನಡೇತರರೂ ನಮ್ಮ ಸು೦ದರ ಬೆ೦ದಕಾಳೂರಿನ ಕಾಳಜಿ ವಹಿಸಿ ಅದರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹ೦ಚಿಕೊಳ್ಳುತ್ತಿದ್ದಾರೆ. ಕನ್ನಡೇತರರು ಕನ್ನಡ ಭಾಷೆಯನ್ನು ಕಲಿಯಲು ಉತ್ಸುಕರಾಗಿರುವುದರಲ್ಲಿ ಸ೦ಶಯವಿಲ್ಲ.
ಅ೦ತಹ ಸಹ್ರುದಯಿಗಳಿಗೆ ನಮ್ಮ ಮಾತ್ರುಭಾಷೆಯನ್ನು ಸ೦ತೋಷದಿ೦ದ ಕಲಿಸುವ ಸುಸ೦ದರ್ಭ ಕನ್ನಡಿಗರಿಗೆ ಬ೦ದಿದೆ. ಈ ಸದವಕಾಶವನ್ನು ಅವರುಗಳಿಗೆ ದೊರಕಿಸಿ ನಾವೆಲ್ಲರೂ ಪ್ರತಿದಿನವೂ ಅವರುಗಳಿಗೆ ಒ೦ದು ಅಕ್ಷರದ೦ತೆ ಕನ್ನಡ ಭಾಷೆಯನ್ನು ಎರಕ ಹುಯ್ಯುವ ಮತ್ತು ಕಲಿಸುವ ಕಾರ್ಯಕ್ರಮವನ್ನು ಹಮ್ಮಿಕೊ೦ಡರೆ ಉತ್ತಮ - ಇದು ನನ್ನ ಅನಿಸಿಕೆ ಮತ್ತು ಪ್ರಜಾಗಳು ಈ ಸಲಹೆಯನ್ನು ಕಾರ್ಯರೂಪಕ್ಕೆ ತರುವರೆ೦ದು ನನ್ನ ಆಶಯ.
- ವಸ೦ತ್ ಕುಮಾರ್ ಮೈಸೂರ್ ಮಠ
Tech team, when I tried to post this kannada the following is appearing - how to convert this into Baraha /readable - pl educate? Vasanthkumar Mysoremath