Skip to Content

ಸಿ.ಅರ್.ಎಸ್. ನ ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳಿಗೆ ಉತ್ತರಗಳು

up
445 users have liked.

ಏನಿದು? ಬೆಂಗಳೂರು ಪ್ರಯಾಣಿಕರ ರೈಲು ಸೇವೆ ಹಾಗೆಂದರೇನು?

ಇದೊಂದು ಸ್ಥಳೀಯ ರೈಲು ಸೇವೆ. ಈ ಸೇವೆಯ ಮೂಲಕ, ಬೆಂಗಳೂರು ಮತ್ತು ಸುತ್ತಮುತ್ತಲ ಉಪನಗರಗಳು ಹಾಗೂ ಪಟ್ಟಣಗಳನ್ನುಸಂಪರ್ಕಿಸುವ ಪ್ರಸ್ತಾವನೆಯಿದೆ. ಈ ಸೇವೆಯು ಈಗಾಗಲೇ ಅಸ್ತಿತ್ವದಲ್ಲಿರುವ ರೈಲು ಹಳಿಗಳನ್ನು ಉಪಯೋಗಿಸಿಕೊಳ್ಳುವಂತೆ ಪ್ರಸ್ತಾಪಿಸಲಾಗಿದೆ. ಯಾವ ರೀತಿ ಮುಂಬೈ, ಚೆನೈ ಮತ್ತು ಹೈದರಾಬಾದ್ ನಗರಗಳಲ್ಲಿ ಸ್ಥಳೀಯ ರೈಲು ಸೇವೆ ಒದಗಿಸಲಾಗುತ್ತಿದೆಯೋ, ಅದೇ ರೀತಿ ನಮ್ಮ  ಬೆಂಗಳೂರು ನಗರದಲ್ಲೂ ಸ್ಥಳೀಯ ರೈಲು ಸೇವೆ ಒದಗಿಸಬೇಕೆಂಬ ಪ್ರಸ್ತಾವನೆಯಾಗಿದೆ.

ಸಿ.ಅರ್.ಎಸ್.( ಕಮ್ಯೂಟರ್ ರೈಲ್ ಸರ್ವಿಸ್) ಹಾಗೆಂದರೇನು?

ಪ್ರಯಾಣಿಕರ ರೈಲು ಸೇವೆ. ಇದನ್ನು 'ಉಪನಗರ ರೈಲು ಸೇವೆ’ ಎಂದೂ ಕರೆಯಲಾಗುತ್ತದೆ

ಬೆಂಗಳೂರಿಗೆ ಸಿ.ಅರ್.ಎಸ್. ಅವಶ್ಯಕತೆ ಇದೆಯೇ?

ಬೆಂಗಳೂರು ನಗರ ಪ್ರದೇಶದ ಜನಸಂಖ್ಯೆಯು 1991-2001 ರ ಮತ್ತು 2001-11 ರ ದಶಕದಲ ಕಾಲಾವಧಿಯಲ್ಲಿ  35% ರಷ್ಟು ಹಾಗೂ 47%  ಹೆಚ್ಚಳ ಕಂಡಿತು. ಈ ಬೆಳವಣಿಗೆಯನ್ನು ನಿಭಾಯಿಸುವ ಸಲುವಾಗಿ ಸರ್ಕಾರ ಭಾರೀ ಪ್ರಮಾಣದ ಹಣವನ್ನು ವೆಚ್ಚ ಮಾಡಿದೆ. 2006-07 ರಿಂದ 2011 ರ ವರೆಗೆ ಸುಮಾರು 3500 ಬಸ್ಸುಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯವರು, ಸೇವೆಗಾಗಿ ಸೇರಿಸಿದ್ದಾರೆ. ಹಾಗೆಯೇ, ಭಾರೀ ಪ್ರಮಾಣದ ಹಣವನ್ನು, ಗ್ರೇಡ್ ವಿಭಜಕಗಳು, ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳು, ಬಿ.ಟ್ರ‍್ಯಾಕ್ ಯೋಜನೆ ಗಳಿಗಾಗಿ ವೆಚ್ಚ ಮಾಡಲಾಗಿದೆ.  ಹಾಗೂ ಇತ್ತೀಚೆಗೆ, 115 ಕಿ.ಮೀ.ಗಳ(ಒಂದು ಹಾಗು ಎರಡನೆ ಹಂತದ ಸಂಯೋಜಿತ ದೂರ) ಸಾಮೂಹಿಕ ಸಾರಿಗೆ ಸೇವೆಯಾದ ಮೆಟ್ರೊ ರೈಲು ಸೇವೆಯನ್ನು, 38,000 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ,ನಿರ್ಮಿಸಲು ಕಾರ್ಯಾರಂಭಮಾಡಲಾಗಿದೆ.

ಆದರೂ, ಬೆಂಗಳೂರು ನಗರದ ಸಮೂಹ ಸಾರಿಗೆ ಅವಶ್ಯಕತೆಯು, "ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸೇವೆ ಹಾಗೂ ನಮ್ಮ ಮೆಟ್ರೊ ರೈಲು ಸೇವೆ ಎರಡನ್ನೂ ಸಂಯೋಜಿಸಿ ದೊರಕುವ ಒಟ್ಟಿನ ಸೇವೆಯನ್ನೂ" ಮೀರುತ್ತದೆ ಎನ್ನುವುದನ್ನು  ಬಹಳಷ್ಟು ಹೆಚ್ಚಿನ ತಜ್ಞರು ಸಂಪೂರ್ಣವಾಗಿ ಒಪ್ಪುತ್ತಾರೆ. ಈ ಕಾರಣಕ್ಕಾಗಿಯೇ ಇಲ್ಲಿ, ಪ್ರಯಾಣಿಕರ ರೈಲು ಸೇವೆ ಪ್ರಸ್ತುತವಾಗುತ್ತದೆ.

ಸಿ.ಅರ್.ಎಸ್. ಫಲಾನುಭವಿಗಳು ಯಾರು?

ಇತರ ಸಾರ್ವಜನಿಕ ಸಾರಿಗೆ ಸಂಸ್ಥೆಗಳಾದ, ಬೆಂಹಳೂರು ಮಹಾನಗರ ಸಾರಿಗೆ ಸಂಸ್ಥೆ, ಮೆಟ್ರೊ, ಮೊನೊ ರೈಲ್ ಇತ್ಯಾದಿಗಳು, ಕೇವಲ ನಗರದ ಇತಿ ಮಿತಿಗಳಲ್ಲಿ ಸೇವೆ ಸಲ್ಲಿಸುತ್ತವೆ. ಆದರೆ, ಸಿ.ಅರ್.ಎಸ್ ಸೇವೆಯು ಈ ಕೆಳಕಂಡವರಿಗೆಲ್ಲರಿಗೂ ಸೇವೆ ಸಲ್ಲಿಸುತ್ತದೆ:

  • ನಗರ ಪ್ರದೇಶದ ವ್ಯಾಪ್ತಿಯಲ್ಲಿ
  • ನಗರದ ಹೊರವಲಯಗಳಲ್ಲಿ ಹಾಗೂ ಉಪನಗರಗಳಲ್ಲಿ
  • ಬೆಂಗಳೂರುನಗರದ ಸುತ್ತ ಮುತ್ತಲಿನ ಪಟ್ಟಣಗಳಲ್ಲಿ

ಬೆಂಗಳೂರು ಮಹಾನಗರ ವ್ಯಾಪ್ತಿಯ ಒಳಗಿನ ನಾಗರೀಕರು ಸಿ.ಅರ್.ಎಸ್. ನಿಂದ ಯಾವ ರೀತಿಯ ಪ್ರಯೋಜನವನ್ನು ಪಡೆಯುತ್ತಾರೆ?

ನಗರದ ಮಿತಿಯಲ್ಲಿ ಹಾಗೂ ಹೃದಯಭಾಗದಲ್ಲಿ  ಚಲಿಸುವ ರೈಲುಗಳನ್ನು, ಒಂದು ಪರ್ಯಾಯ ಸಾರಿಗೆ ಸೇವೆಯನ್ನಾಗಿ ಬಳಸಬಹುದು. ಇದರಿಂದ ಕೆಲಸಕ್ಕಾಗಿ, ಐ.ಟಿ. ಕೇಂದ್ರಗಳಾದ ಎಲೆಕ್ಟ್ರಾನಿಕ್ ಸಿಟಿ, ಐ.ಟಿ.ಪಿ.ಎಲ್., ಹೊರ ವರ್ತುಲ ರಸ್ತೆ ಹಾಗೂ ಕೈಗಾರಿಕಾ ಮತ್ತು ಉತ್ಪಾದನಾ ಕೇಂದ್ರಗಳಾದ ಪೀಣ್ಯ, ಬೊಮ್ಮಸಂದ್ರ ಪ್ರದೇಶಗಳಿಗೆ ಸುಲಭವಾಗಿ ಪ್ರಯಾಣಿಸ ಬಹುದು. ಅಷ್ಟಲ್ಲದೆ ತುಮಕೂರು, ಹೊಸೂರು ಹಾಗು ಇತರ ಪಟ್ಟಣಗಳಿಗೂ ಪ್ರಯಾಣಿಸ ಬಹುದು.

ಬೆಂಗಳೂರು ಸಿ.ಆರ್.ಎಸ್. ಸೇವೆಯು ಯಾವ ಪ್ರದೇಶಗಳನ್ನೊಳಗೊಂಡಿದೆ?

ಪೀಣ್ಯ, ಜಾಲಹಳ್ಳಿ, ಯಲಹಂಕ, ಹೆಬ್ಬಾಳ, ಕೆ.ಅರ್. ಪುರಮ್, ವೈಟ್ಫೀಲ್ಡ್, ಸರ್ಜಾಪುರ, ಎಲೆಕ್ಟ್ರಾನಿಕ್ಸ್ ಸಿಟಿ, ನಾಯಂಡಹಳ್ಳಿ ಮತ್ತು, ಕೆಂಗೇರಿ.

ಬೆಂಗಳೂರು ಸುತ್ತಮುತ್ತಲಿನ ಯಾವ ಪಟ್ಟಣ ಪ್ರದೇಶಗಳು ಸಿ.ಆರ್.ಎಸ್. ಸೇವೆಯಿಂದ ಪ್ರಯೋಜನೆ ಪಡೆದುಕೊಳ್ಳುತ್ತವೆ?

ತುಮಕೂರು, ನೆಲಮಂಗಲ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಮಾಲೂರು, ಬಂಗಾರಪೇಟೆ, ಆನೇಕಲ್, ಹೊಸೂರು, ಬಿಡದಿ, ರಾಮನಗರ, ಚನ್ನಪಟ್ನ, ಮದ್ದೂರು ಹಾಗು ಮಂಡ್ಯ.

ಬೆಂಗಳೂರು ಸಿ.ಅರ್.ಎಸ್. ಪ್ರಮುಖ ಅಂಶಗಳು ಯಾವುವು?

2012 ರ ರೈಟ್ಸ್ ವರದಿಯ ಪ್ರಕಾರ ಬೆಂಗಳೂರು ಸಿ.ಅರ್.ಎಸ್ ಸೇವೆಯು ಈ ಕೆಳಕಂಡ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.

  • ವ್ಯಾಪ್ತಿ
    • 405 ಕಿ.ಮೀ. ಜಾಲ
    • ಬೆಂಗಳೂರು ಸುತ್ತಲಿನ ಉಪನಗರಗಳನ್ನು ಮತ್ತು ಪಟ್ಟಣಗಳನ್ನು ಸಂಪರ್ಕಿಸುತ್ತದೆ
    • 70-100 ಕಿ.ಮೀ. ಗಳ ತ್ರಿಜ್ಯ
  • ವಿಶ್ವಸನೀಯತೆ
    • ವಿಶೇಷವಾದದಾರಿಯ ಹಕ್ಕು
    • ರಸ್ತೆ ಬಳಕೆಯಿಂದುಂಟಾಗುವ ಚೌಕಟ್ಟು/ಮಿತಿಗಳಿಲ್ಲ
    • 1-1.5 ಗಂಟೆಯ ಪ್ರಯಾಣ ಸಮಯ
  • ಸಂಭವನೀಯತೆ
    • 5-10 ನಿಮಿಷದ ಅಂತರದಲ್ಲಿ
    • ಸರಿಯಾದ ಸಮಯಕ್ಕೆ ಆಗಮನ ಹಾಗೂ ನಿರ್ಗಮನ
    • 24 ಗಂಟೆಗಳ ಸೇವೆ

ಬೆಂಗಳೂರಿನ ಯಾವ್ಯಾವ ಪ್ರಮುಖ ಕೈಗಾರಿಕಾ, ವಾಣಿಜ್ಯ, ಹಾಗು ಶೈಕ್ಷಣಿಕ ಕೇಂದ್ರಗಳನ್ನು ಸೆ.ಅರ್.ಎಸ್. ಸೇವೆಯು ತಲುಪುತ್ತದೆ?

ಇತರ ಸಾರ್ವಜನಿಕ ಸಾರಿಗೆ ಸಂಸ್ಥೆಗಳ ಜೊತೆಗೆ ಸಿ.ಅರ್.ಎಸ್. ಸೇವೆಯು ಪೈಪೋಟಿ ನಡೆಸುತ್ತದೆಯೇ?

ಖಂಡಿತ ಇಲ್ಲ. ಸಿ.ಅರ್.ಎಸ್. ಗೆ ತನ್ನದೇ ಆದ ಸೇವೆ ಸಲ್ಲಿಸುವ ಪ್ರದೇಶಗಳಿವೆ. ಈ ಪ್ರದೇಶಗಳಿಗೆ, ಬೇರೆ, ಸಾರ್ವಜನಿಕ ಸಾರಿಗೆ ಸಂಸ್ಥೆಗಳ ಸೇವೆ ಲಭ್ಯವಿಲ್ಲ(ಇದ್ದರೂ, ಅತ್ಯಂತ ಕಡಿಮೆಯಿದೆ). ವಾಸ್ತವವಾಗಿ, ನಗರ ಮತ್ತು ಉಪನಗರಗಳಲ್ಲಿ ಇರುವ ಇತರ ಸಾರ್ವಜನಿಕ ಸಾರಿಗೆ ಸಂಸ್ಥೆಗಳ ಕೊರತೆಯನ್ನು, ಸಿ.ಅರ್.ಎಸ್. ದೂರಮಾಡುತ್ತದೆ.

2012 ರೈಟ್ಸ್ ವರದಿ ಏನು?

2010 ರ ನವೆಂಬರ್/ಡಿಸೆಂಬರ್ ನಲ್ಲಿ, ನಗರ ಭೂಮಿ ಸಾರಿಗೆ ಇಲಾಖೆಯು(ಡಿ.ಯು.ಎಲ್.ಟಿ.) "ಬೆಂಗಳೂರು ಪ್ರಯಾಣಿಕರ ರೈಲು ಸೇವೆ ಅನುಷ್ಠಾನ" ಇದರ ಬಗ್ಗೆ, ಒಂದು ತಾಂತ್ರಿಕ ವರದಿ ಹೊರತರುವ ಜವಾಬ್ದಾರಿಯನ್ನು ರೈಟ್ಸ್ ಲಿಮಿಟೆಡ್ (ಭಾರತೀಯ ರೈಲು,  ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು), ಭಾರತ ಸರ್ಕಾರದ ಒಂದು ಇಲಾಖೆಗೆ ಒಪ್ಪಿಸಿತು.

ಜೂನ್ 2012 ರಲ್ಲಿ ರೈಟ್ಸ್, "ಬೆಂಗಳೂರು ಪ್ರಯಾಣಿಕರ ರೈಲು ಸೇವೆ: ಅನುಷ್ಠಾನ" ಎಂಬ ವರದಿ ಸಲ್ಲಿಸಿತು. ಅಂದಿನಿಂದ, ಈ ವರದಿಯನ್ನು, ಡಿ.ಯು.ಎಲ್.ಟಿ. ಯ ನೇತೃತ್ವದಲ್ಲಿ ಎಲ್ಲಾ ಸಂಬಂಧಪಟ್ಟವರೊಡಗೂಡಿ ಪರಿಶೀಲನೆ ಮಾಡಿ, ಚರ್ಚಿಸಲಾಗಿದೆ. ಮೊಟ್ಟಮೊದಲನೆ ಬಾರಿಗೆ ನಾಗರೀಕ ತಂಡವಾದ ಪ್ರಜಾ ತಂಡ ಮತ್ತು ಇತರ ನಾಗರೀಕರೂ ಕೂಡ ಈ ಚರ್ಚೆಗಳಲ್ಲಿ ಪಾಲ್ಗೊಂಡು ವಿವೇಚಿಸಿದ್ದಾರೆ. ಈ ವರದಿಯ ಗಮನಾರ್ಹ ಮುಖ್ಯಾಂಶಗಳು ಹೀಗಿವೆ:

  • ಈ ವರದಿ ಯು, ಸಿ.ಅರ್.ಎಸ್. ನ  ಅವಶ್ಯಕತೆಯ ಬಗ್ಗೆ, ಒಂದು ಬಲವಾದ ದಾವೆ ಮಾಡುತ್ತದೆ ಹಾಗೂ ಬೆಳೆಯುತ್ತಿರುವ ಬೆಂಗಳೂರು ಮಹಾ ನಗರದ ಅತ್ಯಗತ್ಯಗಳಲ್ಲಿ ಇದೊಂದು ಎಂದು ಹೇಳುತ್ತದೆ.
  • ಬೆಂಗಳೂರನ್ನು ಈ ಕೆಳಕಂಡ ಊರುಗಳೊಡನೆ ಸಂಪರ್ಕಿಸುವಂತೆ ಶಿಫಾರಸು ಮಾಡಿದೆ:
    • ಮಂಡ್ಯ/ರಾಮನಗರ, ತುಮಕೂರು/ನೆಲಮಂಗಲ, ದೊಡ್ಡಬಳ್ಳಾಪುರ/ಚಿಕ್ಕಬಳ್ಳಾಪುರ
    • ವೈಟ್ಫೀಲ್ಡ್, ಮಾಲೂರು, ಬಂಗಾರಪೇಟೆ, ಆನೇಕಲ್, ಹೊಸೂರು
  • ರೈಲು ಸಾರಿಗೆಯ ವಿಶಿಷ್ಟ ಲಕ್ಷಣವಾದ 'ಹಕ್ಕಿನ, ಪ್ರತ್ಯೇಕವಾದ ದಾರಿ' ಯನ್ನು ಪರಿಗಣಿಸಿ:
    • ಯಾವುದೇ ರಸ್ತೆ ಪ್ರೇರಿತ ತೊಂದರೆಗಳಾದ, ಸಂಚಾರ ದಟ್ಟಣೆ, ರಸ್ತೆಯಲ್ಲಿ ತೆವಳುವಿಕೆ ಇತ್ಯಾದಿ ಇರುವುದಿರುವುದನ್ನು ಸೂಚಿಸುತ್ತದೆ.
    • ಇದು ಅತ್ಯಂತ ವೇಗ ಪ್ರಯಾಣದ ಆಯ್ಕೆಯನ್ನು ಸಾಧ್ಯವಾಗಿಸುತ್ತದೆ. 1-1.5 ಗಂಟೆಗಳಲ್ಲಿ 70-100 ಕಿ.ಮೀ ಪ್ರಯಾಣಿಸಬಹುದಾಗಿದೆ
    • ಸರಿಯಾದ ಸಮಯಕ್ಕೆ ರೈಲುಗಳ ಆಗಮನ ಮತ್ತು ನಿರ್ಗಮನ ನಡೆಯುತ್ತದೆ ಎನ್ನುವ ವಾಸ್ತವವನ್ನು ರುಜುವಾತು ಮಾಡುತ್ತದೆ.
    • ಊಹಿಸಬಹುದಾದ ಪ್ರಯಾಣದ ಸಮಯವನ್ನು ದೃಢಪಡಿಸುತ್ತದೆ
    • ಸಿ.ಅರ್.ಎಸ್. ನಾಗರಿಕರಿಗೆ, ಒಂದು "ಅತ್ಯುತ್ತಮ, ವಿಶ್ವಾಸಾರ್ಹ ದಿನನಿತ್ಯ ಪ್ರಯಾಣದ ಆಯ್ಕೆ" ಎಂದು ವಾದಿಸಿದೆ
  • ಸಿ.ಅರ್.ಎಸ್. ಪೂರ್ಣಗೊಂಡಾಗ, 20 ಲಕ್ಷ ಪ್ರಯಾಣಿಕರನ್ನು ಪ್ರತಿ ದಿನ ಸಾಗಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ
  • ರೈಲುಗಳು, ನಗರದ ಕೇಂದ್ರಭಾಗವನ್ನು, ನಗರದ ಅಂಚಿನ ಭಾಗಗಳನ್ನೂ ದಾಟಿ ಮುಕ್ತಾಯಗೊಳ್ಳಬೇಕೆಂಬ ಸಲಹೆ ನೀಡಲಾಗಿದೆ
  • ಭಾರತೀಯ ರೈಲು ಸೇವೆಯ ಮೂಲಸೌಕರ್ಯಕ್ಕೆ ಗಮನಾರ್ಹ ಪರಿಷ್ಕರಣೆಗಳು ಮಾಡಿದ ನಂತರ, ಸಿ.ಅರ್.ಎಸ್. ಸೇವೆ ಸಾಧ್ಯ ಎಂದು ಅಂಕಿ ಮತ್ತು ಅಂಶಗಳಿಂದ ನಿಸ್ಸಂದಿಗ್ಧವಾಗಿ ಸಾಧಿಸಲಾಗಿದೆ
  • 3 ಹಂತಗಳ, 7 ವರ್ಷಗಳಲ್ಲಿ ಮುಗಿಯಬಹುದಾದ ಕೆಲಸಗಳಿಗೆ 8000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ
  • ಸಿ.ಅರ್.ಎಸ್. ಮೊದಲ ಹಂತದ(1A) ಸೇವೆಯನ್ನು, 3200 ಕೋಟಿ ವೆಚ್ಚದಲ್ಲಿ, 2 ವರ್ಷಗಳ ಒಳಗೆ,  ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತದೆ ಎಂಬ ಹಕ್ಕಿನ ಬೇಡಿಕೆಯಿದೆ

ಸಿ.ಅರ್.ಎಸ್. ನ್ನು, ರೈಟ್ಸ್, ಒಂದೇ ಬಾರಿಗೆ ಅನುಷ್ಠಾನಗೊಳಿಸಲು ಇಚ್ಚಿಸಿದೆಯೊ ಅಥವಾ ಹಂತ ಹಂತಗಳಲ್ಲಿ ಅನುಷ್ಠಾನಗೊಳಿಸಲು ಸಲಹೆ ಮಾಡಿದೆಯೊ?

ಸಿ.ಅರ್.ಎಸ್. ನ್ನು, ಹಂತ ಹಂತವಾಗಿ ಕಾರ್ಯಗತಗೊಳಿಸಬೇಕೆಂದು ರೈಟ್ಸ್ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಇದನ್ನು, 1A, 1B, 2 ಮತ್ತು 3 ನೇ ಹಂತಗಳಾಗಿ ವಿಭಜಿಸಲಾಗಿದೆ.

ಹಂತ-1A ನಲ್ಲಿ ಗುರುತಿಸಿರುವ ಕಾಮಗಾರಿಗಳ್ಯಾವುವು? ಅವುಗಳಿಗೆ ತಗಲುವ ಅಂದಾಜು ವೆಚ್ಚವೇನು ?

ಕಾಮಗಾರಿಗಳು

  • ಬೆಂಗಳೂರು ನಗರ ರೈಲು ನಿಲ್ದಾಣದಲ್ಲಿ 2 ಹೆಚ್ಚುವರಿ ರೈಲು ವೇದಿಕೆಗಳಿಗಳನ್ನು(ಪ್ಲಾಟ್ಫ಼ಾರ್ಮ್) ಸೇರಿಸುವುದು
  • ಬೆಂಗಳೂರು ರೈಲು ನಿಲ್ದಾಣದಲ್ಲಿನ ಪಿಟ್ ಲೈನು ಗಳನ್ನು ಬಿನ್ನಿ ಮಿಲ್ಲ್ಸ್ ನ ಜಾಗಕ್ಕೆ ವರ್ಗಾಯಿಸುವುದು
  • 15 ಇ.ಎಮ್.ಯು. ರೇಕ್ ಗಳನ್ನು ಪಡೆದು, ಎಮ್.ಇ.ಎಮ್.ಯು/ಡಿ.ಇ.ಎಮ್.ಯು ಗಳನ್ನು ಬದಲಾಯಿಸುವುದು
  • ಇ.ಎಮ್.ಯು. ನಿರ್ವಹಣೆ ಕೇಂದ್ರವನ್ನು ಯಲಹಂಕದಲ್ಲಿ ಸ್ಥಾಪಿಸಿವುದು
  • ಬೆಂಗಳೂರು ನಗರ ರೈಲು ನಿಲ್ದಾಣಕ್ಕೆ ಎಲ್ಲಾ ದಿಕ್ಕುಗಳಿಂದಲೂ ಆಗಮನ/ನಿರ್ಗಮನ ದ್ವಾರಗಳನ್ನು ಸ್ಥಾಪಿಸಿವುದು
  • ಬೆಂಗಳೂರು ನಗರ ರೈಲು ನಿಲ್ದಾಣ ಹಾಗು ಕಂಟೋನ್ಮೆಂಟ್ ನಡುವೆ • 2 ಪ್ರತ್ಯೇಕ ರೈಲ್ವೇ ಹಳಿಗಳನ್ನು ಸ್ಥಾಪಿಸಿವುದು
  • ವೈಟ್ಫೀಲ್ಡ್ ಹಾಗು ಕಂಟೋನ್ಮೆಂಟ್ ನಡುವೆ ಸ್ವಯಂಚಾಲಿತ ಸಂಚಾರೀ ಸಂಕೇತಗಳ ವ್ಯವಸ್ಥೆ(ಆಟೋಮ್ಯಾಟಿಕ್ ಸಿಗ್ನಲಿಂಗ್)
  • ಈ ವಿಭಾಗಗಳ ವಿದ್ಯುದೀಕರಣ ಮಾಡುವುದು: ಯಶವಂತಪುರ/ಬೈಯ್ಯಪ್ಪನಹಳ್ಳಿ/ಹೊಸೂರು, ಬೆಂ.ನಗರ/ಯಶವಂತಪುರ/ತುಮಕೂರು, ಯಶವಂತಪುರ/ಯಲಹಂಕ/ಚಿಕ್ಕಬಳ್ಳಾಪುರ
  • ರೈಲು ವೇದಿಕೆಯ(ಪ್ಲಾಟ್ಫ಼ಾರ್ಮ್) ಎತ್ತರವನ್ನು ಇ.ಎಮ್.ಯು. ಎತ್ತರಕ್ಕೆ ಹೊಂದುವಂತೆ ಹೆಚ್ಚಿಸುವುದು.
  • ಈ ಕೆಳಕಂಡಲ್ಲಿ ಪ್ರಯಾಣಿಕರ ಸೌಕರ್ಯಗಳನ್ನು ಒದಗಿಸುವುದು: ಬಂಗಾರಪೇಟೆ, ಮಂಡ್ಯ, ತುಮಕೂರು, ಹೊಸೂರು, ದೊಡ್ಡಬಳ್ಳಾಪುರ, ಯಶವಂತಪುರ,ಯಲಹಂಕ,ಚಿಕ್ಕಬಳ್ಳಾಪುರ: ವಾಹನ ನಿಲುಗಡೆ ಪ್ರದೇಶ, ಪ್ರಯಾಣಿಕರ ನಿರೀಕ್ಷಣಾ ಕೊಠಡಿ ಇತ್ಯಾದಿ

ಬಂಡವಾಳ ವೆಚ್ಚ

  • 3433 ಕೋಟಿ ರೂ.

ಸಮಯದ ಮಿತಿ

  • 2 ವರ್ಷಗಳು

ಫಲಿತಾಂಶ - ಸಿ.ಅರ್.ಎಸ್. ಸಂಪೂರ್ಣ ಸೇವೆ ದೊರೆತಾಗ ದಿನಕ್ಕೆ 5 ಲಕ್ಷ ಬಾರಿ ಪ್ರಯಾಣ(ಟ್ರಿಪ್) ಸಾಮರ್ಥ್ಯ

 

ಹಂತ-1B ನಲ್ಲಿ ಗುರುತಿಸಿರುವ ಕಾಮಗಾರಿಗಳು ಯಾವುವು? ಅದಕ್ಕೆ ತಗಲುವ ಅಂದಾಜು ವೆಚ್ಚವೇನು?

ಕಾಮಗಾರಿಗಳು

  • ಈ ವಿಭಾಗಗಳಲ್ಲಿ ರೈಲ್ವೇ ಹಳಿಗಳನ್ನು ದ್ವಿಗುಣಗೊಳಿಸುವುದು: ವೈಟ್ಫೀಲ್ಡ್ /ಬಂಗಾರಪೇಟೆ, ಯಲಹಂಕ/ದೊಡ್ಡಬಳ್ಳಾಪುರ, ಯಶವಂತಪುರ/ಬೈಯಪ್ಪನಹಳ್ಳಿ, ಸೋಲದೇವನಹಳ್ಳಿ/ಎನ್.ಎನ್.ಜಿ.ಎ.
  • ಈ ವಿಭಾಗಗಳಲ್ಲಿ ಸ್ವಯಂಚಾಲಿತ ಸಂಚಾರೀ ಸಂಕೇತಗಳ ವ್ಯವಸ್ಥೆ(ಆಟೋಮ್ಯಾಟಿಕ್ ಸಿಗ್ನಲಿಂಗ್) ಅಳವಡಿಸುವುದು: ವೈಟ್ಫೀಲ್ಡ್/ಬಂಗಾರಪೇಟೆ, ಯಲಹಂಕ/ದೊಡ್ಡಬಳ್ಳಾಪುರ, ಯಶವಂತಪುರ/ಬೈಯಪ್ಪನಹಳ್ಳಿ, ಸೋಲದೇವನಹಳ್ಳಿ/ಎನ್.ಎನ್.ಜಿ.ಎ.
  • ಬೈಯಪ್ಪನಹಳ್ಳಿ ಯನ್ನು ಕೋಚಿಂಗ್ ಟರ್ಮಿನಲ್ ಆಗಿ ಅಭಿವ್ರುದ್ಧಿಸುವುದು: 5 ವೇದಿಕೆ(ಪ್ಲಾಟ್ಫ಼ಾರ್ಮ್), 10 ಪಿಟ್-ಲೈನುಗಳು, 11 

ಸ್ಟೇಬ್ಲಿಂಗ್ ಲೈನ್ಸ್ ಗಳನ್ನು ನಿರ್ಮಿಸುವುದು  

  • 9 ಹೆಚ್ಚುವರಿ ರೇಕ್ ಗಳು

ಬಂಡವಾಳ ಹೂಡಿಕೆ

  • 2363 ಕೋಟಿ ರೂ.

ಸಮಯದ ಮಿತಿ

  • 2 ವರ್ಷಗಳು

ಫಲಿತಾಂಶ - ಸಿ.ಅರ್.ಎಸ್. ಮೌಲ್ಯವರ್ದಿತ ಸೇವೆ ದೊರೆತಾಗ ದಿನಕ್ಕೆ10 ಲಕ್ಷ ಬಾರಿ ಪ್ರಯಾಣ(ಟ್ರಿಪ್) ಸಾಮರ್ಥ್ಯ.

ಹಂತ-2 ರಲ್ಲಿ ಗುರುತಿಸಿರುವ ಕಾಮಗಾರಿಗಳು ಯಾವುವು? ಅದಕ್ಕೆ ತಗಲುವ ಅಂದಾಜು ವೆಚ್ಚವೇನು?

ಕಾಮಗಾರಿಗಳು

  • ಬೆಂ. ನಗರ ರೈಲುನಿಲ್ದಾಣವನ್ನು ಮರುರೂಪಿಸುವುದು - ಕೊನೆಯ ಹಂತ
  • ಬೈಯಪ್ಪನಹಳ್ಳಿ ಪ್ರದೇಶದಲ್ಲಿ • 3 ಮೇಲ್ಸೇತುವೆ
  • ಯಶವಂತಪುರದಲ್ಲಿ • 1 ಮೇಲ್ಸೇತುವೆ
  • ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ಸಂಪರ್ಕಿಸುವ ಲೈನ್ ಗೆ ಯಲಹಂಕದಲ್ಲಿ ಬೈಪಾಸ್ ನಿರ್ಮಿಸುವುದು
  • ಹೊಸ ನಿಲ್ದಾಣಗಳ ಅಭಿವೃದ್ಧಿ
  • ಹೆಚ್ಚುವರಿ ಇ.ಎಮ್.ಯು ರೇಕ್ ಗಳು - 15

ಬಂಡವಾಳ ಹೂಡಿಕೆ

  • 2550 ಕೋಟಿ ರೂ.

ಸಮಯದ ಮಿತಿ

  • 3 ವರ್ಷಗಳು

ಫಲಿತಾಂಶ - ಸಿ.ಅರ್.ಎಸ್. ಸಾಮರ್ಥ್ಯ  ದಿನಕ್ಕೆ 25 ಲಕ್ಷ ಬಾರಿ ಪ್ರಯಾಣ(ಟ್ರಿಪ್).

ಹಂತ-3 ರಲ್ಲಿ ಗುರುತಿಸಿರುವ ಕಾಮಗಾರಿಗಳು ಯಾವುವು? ಅದಕ್ಕೆ ತಗಲುವ ಅಂದಾಜು ವೆಚ್ಚವೇನು?

 ಕಾಮಗಾರಿಗಳು - ಸಿ.ಅರ್.ಎಸ್. ನ ವ್ಯಾಪ್ತಿ ಮತ್ತು ಚಟುವಟಿಕೆಗಳ ವಿಸ್ತರಣೆ

  • ಚಿಕ್ಕಬಾಣವರ-ಸತ್ಯಮಂಗಲ ನಡುವೆ ನಿರ್ಮಾಣ ಹಂತದಲ್ಲಿರುವ ಹೊಸ ಲೈನ್ ಗೆ ಸಿ.ಅರ್.ಎಸ್. ವಿಸ್ತರಿಸುವುದು
  • ಬೈಯಪ್ಪನಹಳ್ಳಿ-ವಿಮಾನಪುರ ನಡುವಿನ ಉಪಯೋಗಿಸದೆ ಇರುವ ಲೈನನ್ನು ನವೀಕರಣಗೊಳಿಸಿ ಅಲ್ಲಿಗೆ ಸಿ.ಅರ್.ಎಸ್ ವಿಸ್ತರಿಸುವುದು
  • ಯಶವಂತಪುರವನ್ನು ತಾಕದೆ ಯಲಹಂಕ ಹಾಗು ಹೆಬ್ಬಾಳದ ನಡುವೆ ಒಂದು ನೇರ ಸಂಪರ್ಕದ ಲೈನ್
  • ಉದ್ದವಾದ ಇ.ಎಮ್.ಯು. ಗಳನ್ನು ಪರಿಚಯಿಸುವುದು
  • ವೇಗವಾದ ಸೇವೆಗಳನ್ನು ಪರಿಚಯಿಸುವುದು (ಸೀಮಿತವಾದ ನಿಲುಗಡೆಗಳು)
  • ಈವಿಭಾಗಗಳನ್ನು ತ್ರಿಗುಣ/ನಾಲ್ಕುಪಟ್ಟು ಹೆಚ್ಚಿಸುವುದು: ಬೆಂ. ನಗರ-ವೈಟ್ಫೀಲ್ಡ್, ಬೈಯಪ್ಪನಹಳ್ಳಿ-ಹೊಸೂರು, ಬೆಂ. ನಗರ-ತುಮಕೂರು, ಬೆಂ. ನಗರ-ಮೈಸೂರು ಮತ್ತಿತರ ವಿಭಾಗಗಳು
  • ಎಲ್ಲಾ ಲೆವೆಲ್ ಕ್ರಾಸಿಂಗ್ ಗಳನ್ನು ತೆರವುಗೊಳಿಸುವುದು
  • ಬೈಯಪ್ಪನಹಳ್ಳಿ ರೈಲು ನಿಲ್ದಾಣ ಹಾಗು ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ನಡುವೆ ಮೇಲ್ಸೇತುವೆ ನಿರ್ಮಿಸುವುದು
  • 4 ನೇ ಕೋಚಿಂಗ್ ಟರ್ಮಿನಲ್ ಹೆಜ್ಜಾಲದಲ್ಲಿ ನಿರ್ಮಿಸುವುದು
  • ತುಮಕೂರು, ಮೈಸೂರು ಮತ್ತು ದೊಡ್ಡಬಳ್ಳಾಪುರದಲ್ಲಿ ಹೊಸ ಸರಕು ಸಾಗಣೆ ಟರ್ಮಿನಲ್ ಗಳ ನಿರ್ಮಾಣ
  • ನಗರದ ಸುತ್ತ ವರ್ತುಲ ರೈಲು - ಮೊದಲನೆಯದು 40 ಕಿಮೀ ತ್ರಿಜ್ಯದಲ್ಲಿ, 70 ಕಿಮೀ ತ್ರಿಜ್ಯದಲ್ಲಿ ಎರಡನೆಯದು
  • ವಿಮಾನ ನಿಲ್ದಾಣ ಸಂಪರ್ಕಿಸುವ ರೈಲು

ಸೂಚನೆ - ಯಾವುದೇ ವೆಚ್ಚ ಅಥವಾ ಕಾಲಮಿತಿಯಲನ್ನು ವರದಿಯಲ್ಲಿ ನೀಡಲಾಗಿಲ್ಲ

ಸಂಪೂರ್ಣ ಯೋಜನೆಯನ್ನು ಪೂರ್ಣಗೊಳಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಒಟ್ಟು ವೆಚ್ಚವೆಷ್ಟು?

7 ವರ್ಷಗಳು, 8000 ಕೋಟಿ ರೂ.

ಎಷ್ಟು ಶೀಘ್ರದಲ್ಲಿ ಸಿ.ಆರ್.ಎಸ್. ಅನುಷ್ಟಾನಗೊಳಿಸಬಹುದು?

ಹಂತ 1A ಪೂರ್ಣಗೊಂಡನಂತರ -  ಒಪ್ಪಿಗೆಯಿತ್ತ ದಿನಾಂಕದಿಂದ 2 ವರ್ಷಗಳ ನಂತರ, ಪೂರ್ಣ ಪ್ರಮಾಣದ ಸಿ.ಅರ್.ಎಸ್. ಕಾರ್ಯನಿರ್ವಹಿಸುವಂತೆ ಮಾಡಬಹುದು.

ಕರ್ನಾಟಕ ಸರ್ಕಾರ ಹಾಗು ಭಾರತೀಯ ರೈಲ್ವೆ ಈ ಯೋಜನೆಗೆ ಅನುಮೋದನೆ ನೀಡಿದ ತಕ್ಷಣ, ಕೆಲವು ಭಾಗಗಳಲ್ಲಿ,  ಸಿ.ಆರ್.ಎಸ್. ಸೇವೆಗಳನ್ನು ತತ್ ಕ್ಷಣದಿಂದ ಆರಂಭಿಸಬಹುದು ಎಂದು ,ರೈಲ್ವೆ ಇಲಾಖೆಯವರು ಸೂಚಿಸಿದ್ದಾರೆ.

ತಕ್ಷಣ ಸಿ.ಆರ್.ಎಸ್. ಆರಂಭಿಸಲು ಬೇಕಾಗುವ ಕನಿಷ್ಠ ಬೆಲೆ ಏನು?

ಡಿ.ಯು.ಎಲ್.ಟಿ ಯು ಸಿ.ಆರ್.ಎಸ್. ಆರಂಭಿಸಲು ಬೇಕಾಗಿರುವ ಕನಿಷ್ಠ ಹಣಕಾಸು ಮತ್ತು ಅದನ್ನು ಹೊಂದಿಸಿಕೊಳ್ಳುವ ಬಗೆಗೆ ವಿಚಾರಮಾಡಲು ರೈಟ್ಸ್ ಗೆ ಕೇಳಿಕೊಂಡಿದೆ

ಸಿ.ಆರ್.ಎಸ್. ಗೆ ಹೊಸ ರೈಲು ಮಾರ್ಗಗಳ ನಿರ್ಮಾಣ ಅವಶ್ಯಕತೆ ಇದೆಯೇ?

ಇಲ್ಲ. 2ನೇ ಹಂತದ ಕಾಮಗಾರಿಗಳು ಶುರುವಾಗುವತನಕ- ಬೇಕಾಗಿರುವುದೇನೆಂದರೆ: ಸಧ್ಯ ಇರುವ ರೈಲ್ವೇ ಮೂಲಸೌಕರ್ಯಗಳ ಅಭಿವ್ರುದ್ಧಿ-ಪ್ಲಾಟ್ಫ಼ಾರ್ಮ್/ಪಿಟ್/ಸ್ಟಬಿಲೈಜ಼ಿಂಗ್ ಲೈನ್ಸ್,  ಸ್ವಯಂಚಾಲಿತ ಸಿಗ್ನಲಿಂಗ್ ಗೆ ನವೀಕರಣೆ ಮತ್ತು ಕನಿಷ್ಠ ಸಮಯದಲ್ಲಿ-ನಿಲ್ದಾಣಗಳಲ್ಲಿ ರೈಲುಗಳ ಬದಲಾವಣೆ.

ಈಗಾಗಲೇ ಇರುವ ರೈಲ್ವೆ ಕಾರ್ಯಯೋಜನೆಗಳ ಮತ್ತು ಮೂಲಭೂತ ಸೌಕರ್ಯಗಳ ಮೇಲೆ ಪರಿಣಾಮ ಉಂಟುಮಾಡುತ್ತದೆ ಯೇ?

ಹೌದು, ಆದರೆ ಸಕಾರಾತ್ಮಕ ರೀತಿಯಲ್ಲಿ. ಶಿಫಾರಸು ಮಾಡಿರುವ ರೈಲ್ವೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಯು ಸುಧಾರಿಸುವುದರಿಂದ, ಹೆಚ್ಚು ರೈಲುಗಳು ಹೆಚ್ಚುವರಿ ಸಾಮರ್ಥ್ಯದಿಂದ ಹೆಚ್ಚು ಕಾರ್ಯಯೋಜನೆಗಳನ್ನು ಜಾರಿಗೊಳಿಸಬಹುದು ಮತ್ತು ಪ್ರಯಾಣಿಕರ ಸೌಕರ್ಯಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು ತರಬಹುದು.

ಸಿ.ಅರ್.ಎಸ್. ಗಾಗಿ ಎಷ್ಟು ಭೂಮಿ ವಶಪಡಿಸಿಕೊಳ್ಳುವ ಅಗತ್ಯವಿರುತ್ತದೆ?

ರೈಟ್ಸ್ ವರದಿ ಮತ್ತು ದಕ್ಷಿಣ ರೈಲ್ವೆಯ ಇತ್ತೀಚಿನ ದೃಢೀಕರಣದ ಪ್ರಕಾರ, ಸಿ.ಅರ್.ಎಸ್. ಆರಂಭಿಸಲು ಭೂಮಿ ವಶಪಡಿಸಿಕೊಳ್ಳುವ ಅಗತ್ಯವಿಲ್ಲ. ಹಾಗೆ, ಯಾವುದೇ ಹೆಚ್ಚುವರಿ ಭೂಮಿ ಬೇಕಾದಲ್ಲಿ, ಆ ಭೂಮಿಯು ಈಗಾಗಲೇ ರೈಲ್ವೆ ಇಲಾಖೆ ಹೊಂದಿರುವಂತಹದೇ ಆಗಿದೆ.

ಪ್ರಯಾಣಿಕರ ರೈಲು ನಗರದಲ್ಲಿನ ಸಾರ್ವಜನಿಕ ಸಾರಿಗೆಯ ಎಷ್ಟು ಪಾಲು ತೆಗೆದುಕೊಳ್ಳುತ್ತದೆ?

ದಿನಕ್ಕೆ 20-25 ಲಕ್ಷ ಪ್ರಯಾಣಿಕರ ಪ್ರಯಾಣವನ್ನು ತಡೆದುಕೊಳ್ಳುವ ಸಾಮರ್ಥ್ಯವಿದೆ.

ಸಿ.ಅರ್.ಎಸ್. ನಗರದ ರಸ್ತೆಗಳಲ್ಲಿ ಎಷ್ಟು ಪ್ರಮಾಣದ ಸಂಚಾರ ದಟ್ಟಣೆ ದೂರ ಮಾಡಬಹುದು?

1 ಪ್ರಯಾಣಿಕರ ರೈಲು 300 ಕಾರುಗಳು ಅಥವಾ 20 ಬಸ್ಸು ಗಳನ್ನು ರಸ್ತೆಯ ಮೇಲಿಂದ ತೆಗೆಯುವ ಸಾಮರ್ಥ್ಯ ಹೊಂದಿದೆ. ಒಂದು ಅಧ್ಯಯನದ ಪ್ರಕಾರ ದಿನಕ್ಕೆ 1.5 ಲಕ್ಷ ಪ್ರಯಾಣಿಕರು ಪ್ರಯಾಣಿಸುವ ಸಿ.ಅರ್.ಎಸ್ ಪ್ರತಿಯಾಗಿ ರಸ್ತೆಗಳಿಂದ 50,000 ಕಾರುಗಳು ಕಡಿಮೆಯಾಗಲು ಕಾರಣವಾಗುತ್ತದೆ.

ಹೆಚ್ಚು ಮಾಹಿತಿಗಾಗಿ ಈ ಕೊಂಡಿಯನ್ನು ಸಂಪರ್ಕಿಸಿರಿ: - http://praja.in/en/projects/3110/announcement/socio-econmic-benefits-bangalore-commuter-rail-service

ಮೆಟ್ರೋ, ಎಚ್.ಎಸ್.ಅರ್.ಎಲ್.(ಹೈ ಸ್ಪೀಡ್ ರೈಲ್) ಮೊನೊರೈಲ್, ಎದುರಿಗೆ ಸಿ.ಆರ್.ಎಸ್. ಹೋಲಿಸಿದರೆ ಹೇಗೆ?

 

ಸಿ.ಆರ್.ಎಸ್.*

ಮೆಟ್ರೋ*

ಮೊನೊರೈಲ್

ಎಚ್.ಎಸ್.ಅರ್.ಎಲ್

  ದೈನಂದಿನ ಪ್ರಯಾಣಿಕರು

25,00,000

10,50,000

1,50,000

30,000

  ಉದ್ದ

405 Kms

115 Kms

60 Kms

35 Kms

 ಒಟ್ಟು ವೆಚ್ಚ

Rs. 8,000 Crs

Rs. 38,000 Crs

Rs. 8,400 Crs

Rs. 6000 Crs

  ನಿರ್ಮಾಣ ವೆಚ್ಚ

  (ಪ್ರತಿ ಕಿ.ಮೀ. ಗೆ)

Rs 15-20 Crs

Rs. 200-400 Crs

Rs. 150 Crs

Rs. 180-200 Crs

Data Source - *  - 2012 RITES Report on CRS, ∏ - News Media

ಸಿ.ಆರ್.ಎಸ್. ಬೆಂಗಳೂರಿನ ಒಟ್ಟಾರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೇಗೆ ಹಿಡಿಸುತ್ತದೆ? ಮುಖ್ಯವಾಗಿ ಇತರ ಸಾರ್ವಜನಿಕ ಸಾರಿಗೆಯೊಂದಿಗೆ ಹೊಂದಿಕೊಳ್ಳುತ್ತದೆ?

ತನ್ನ ಪ್ರವೃತ್ತಿಗನುಗುಣವಾಗಿ ಸಿ.ಆರ್.ಎಸ್. ಗೆ ಕೊನೆ ಮೈಲಿನ ಸಂಪರ್ಕದ(ಲಾಸ್ಟ್ ಮೈಲ್) ಅಗತ್ಯವಿದೆ ಜೊತೆಯಾಗಿ ನಗರದ ಕೇಂದ್ರಭಾಗಕ್ಕೂ ಸಂಪರ್ಕ ಸೇವೆಯ ಬೆಂಬಲದ ಅಗತ್ಯವಿದೆ. ಸಿ.ಆರ್.ಎಸ್. 80-90% ಸಮಯ ಪ್ರಮುಖ ರಸ್ತೆಗಳು ಮತ್ತು ಚೌಕಗಳ ಉದ್ದಕ್ಕೂ ಚಲಿಸುವುದರಿಂದ, ಇತರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಜೊತೆಗೆ ಪ್ರಬಲ ಸಂಪರ್ಕ ಹೊಂದುವ ಇಚ್ಛೆ ಇರುತ್ತದೆ.

ಸಿ.ಆರ್.ಎಸ್. ಯೋಜನೆಯನ್ನು ಅನುಷ್ಠಾನಗೊಳಿಸಲು ಯಾರ ಅನುಮತಿಯ ಅಗತ್ಯವಿದೆ?

ಕರ್ನಾಟಕ ರಾಜ್ಯ ಸರ್ಕಾರ ಪ್ರಮುಖ ಅನುಮೋದನೆ ಅಧಿಕಾರಹೊಂದಿದೆ ನಂತರ ಭಾರತೀಯ ರೈಲ್ವೆಯ ಅನುಮತಿಯ ಅಗತ್ಯವಿದೆ.

ಬೆಂಗಳೂರು ಸಿ.ಆರ್.ಎಸ್. ಗಾಗಿ ಯಾವುದಾದರೂ ಸಾಮಾಜಿಕ ಆರ್ಥಿಕ ಅಧ್ಯಯನ ಮಾಡಲಾಗಿದೆಯೇ?

ಹೌದು. Praja.in ನಲ್ಲಿ ಒಂದು ಅಧ್ಯಯನ ಲಭ್ಯವಿದೆ @ http://praja.in/en/projects/3110/announcement/socio-econmic-benefits-bangalore-commuter-rail-service

 

AttachmentSize
FAQs - Bengaluru Commuter Rail Service Kannada.doc729 KB

Comments

Bheema.Upadhyaya's picture

On my part, I am going to

On my part, I am going to take print (Kannada & English) of this page and keep  in my work-desk. Lets see how it goes. I have done same in BMTC support as well. Response was good. One man show works too :)

" My mantra to public bodies=> Enable->Educate->Enforce. Where does  DDC  fit?"
kbsyed61's picture

A Big Thank you @guru!

First of all my gratitude to our friend Guruprasad for doing this translation work. I must admit for first time somebody who has come forward to help us with Kannada translation.

Guru, Thank you and will be looking forward to lot of help on creating documents in Kannada.

-Syed

Praja.in comment guidelines

Posting Guidelines apply for comments as well. No foul language, hate mongering or personal attacks. If criticizing third person or an authority, you must be fact based, as constructive as possible, and use gentle words. Avoid going off-topic no matter how nice your comment is. Moderators reserve the right to either edit or simply delete comments that don't meet these guidelines. If you are nice enough to realize you violated the guidelines, please save Moderators some time by editing and fixing yourself. Thanks!



about seo | book