ಇತ್ತೀಚೆಗೆ ಹೆಬ್ಬಾಳ ಕೆರೆಯ ರಕ್ಷಣೆಯ ಬಗ್ಗೆ ಮೇಣದ ಬತ್ತಿ ಪ್ರತಿಭಟನೆ ನಡೆಸುವ ಬಗ್ಗೆ ಮಾತಾಡುತ್ತಿದ್ದೆವಲ್ಲ, ನೆನಪಿದೆಯೆ?
ಸಂಪದದ ಮುರಳಿಯವರು ಅಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಂತೆ. ಅವರಿಗೆ ಅಲ್ಲಿ ಸಾಕಷ್ಟು ಜನ ಸೇರಿದ್ದಕ್ಕೇನೋ ಸಂತೋಷವೇ ಆಗಿದೆ. 'ಪರವಾಗಿಲ್ವೇ ನಮ್ಮ್ ಊರಿನಲ್ಲಿ ನದಿ-ಕೆರೆ ಬಗ್ಗೆ ತಲೆ ಕೆಡಿಸಿಕೊಳ್ಳೋಕೂ ಸುಮಾರು ಜನ ಇದ್ದಾರಲ್ಲ' ಅಂತ. ಆದರೆ ಅವ್ರು ಹೇಳೊ ಪ್ರಕಾರ ಕನ್ನಡದ ಜನ ಯಾರೂ ಕಾಣಿಸ್ತಾನೆ ಇರಲಿಲ್ಲ, ಕಾರ್ಯಕ್ರಮದ ಕಲಾಪಗಳೆಲ್ಲಾ ಇಂಗ್ಲೀಷು ಹಿಂದಿಯಲ್ಲೇ ನಡೆಯುತ್ತಿದ್ದವಂತೆ.
ಬೇರೆ ಊರಿನವರು ಬಂದು ನಮ್ಮ ಕೆರೆಮೇಲೆ ಪ್ರೀತಿ ತೋರಿಸಿದರೆ ನಮಗೆಲ್ಲ ನಿಜಕ್ಕೂ ಇಷ್ಟಾನೆ! ಆದ್ರೆ ಬೆಂಗಳೂರಿನ 'ಉಟ್ಟು ವೋರಾಟಗಾರ'ರೆಲ್ಲಾ ಎಲ್ಲಿ ಹೋಗಿದ್ದರು ಅಂತ.
ಆವ್ರೆ ಹೇಳೋಹಾಗೆ 'ಕನ್ನಡ ಮಾತಾಡುವವರಿಗೆ ಆಸಕ್ತಿ ಇದ್ದಿದ್ದರೆ ನಮ್ಮ ಕೆರೆಗಳು ಈ ಮಟ್ಟಕ್ಕೆ ಬರ್ತಾಯಿತ್ತಾ ' ?
ಯಾರ್
ಯಾರ್ ಕನ್ನಡಿಗರೋ ಯಾರ್ ಅಲ್ಲ್ವೊ ಹೆಂಗಯ್ಯ ಹೇಳಕ್ಕ್ ಆಗುತ್ತೆ? social aspects to it also. those participated were prolly people of a certain background.
ರಾಮಾಯಣಕ್ಕೂ ಇಮಾಮ್ ಸಾಬೀಗೂ ಏನು ಸಂಬಂಧ?
ಭಾಷೆ ಹಾಗೂ ಪರಿಸರ ಕಾಳಜಿಯ ನಡುವೆ ಕೊಂಡಿ ಹಾಕುವ ಅವಶ್ಯಕತೆಯೂ ಇಲ್ಲ, ಅದು ಸರಿಯೂ ಅಲ್ಲ. ಎರಡೂ ವಿಷಯಗಳನ್ನೂ ಬೇರೆ ಬೇರೆ ತಕ್ಕಡಿಗಳಲ್ಲಿ ತೂಗುವುದೇ ಸೂಕ್ತ.
ಅಂದ ಹಾಗೆ, ನಮ್ಮ ಕನ್ನಡ ಮೇಷ್ಟರೊಬ್ಬರು ಹೇಳ್ತಾ ಇದ್ದರು:
ತಮಿಳರು ದುರಭಿಮಾನಿಗಳು, ತೆಲುಗರು ಸ್ವಾಭಿಮಾನಿಗಳು, ಕನ್ನಡಿಗರು ನಿರಭಿಮಾನಿಗಳು ಅಂತ. ಕೇಳಿ ನಗುವುದಕ್ಕೆ ಚೆನ್ನಾಗಿದೆ. ಆದರ ಪರಿಸ್ಥಿತಿಯ ಒತ್ತಡ ಅರಿವಾದಾಗ, ಅಲ್ಲೋಲಕಲ್ಲೋಲವಾಗುವುದು ಸಹಜವೇ.