ನಮ್ಮ ಪ್ರಜಾ ಗೆಳೆಯರಿಗೆ ನಮಸ್ಕಾರ,
“ಬೆಂಗಳೂರು ಉಪನಗರ ರೈಲು ಸೇವೆ”ಯನ್ನು ಆರಂಭಿಸಲು ಇದು ಸಕಾಲ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪುರ ಪಟ್ಟಣಗಳ ನಾಗರೀಕರು ಉಪನಗರ ರೈಲ್ವೆಯಂತಹ ಸಮೂಹ ಸಾರಿಗೆಗಾಗಿ ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದಾರೆ. ಬೆಂಗಳೂರು ನಗರ ಉತ್ತಮ ಸಾರ್ವಜನಿಕ ಸಾರಿಗೆಗೆ ಅರ್ಹವಾಗಿದೆ. ಅದು ದಶಕದಿಂದಲೂ ಪ್ರಗತಿಯಲ್ಲಿರುವ ನಮ್ಮ ಮೆಟ್ರೋಗಿಂತಲೂ ಉತ್ತಮವಾದ ವ್ಯವಸ್ಥೆಗೆ ಅರ್ಹವಾಗಿದೆ. ಬೆಂಗಳೂರಿಗೆ “ಉಪನಗರ ರೈಲು ಸೇವೆ”ಯು ಇದೀಗಲೇ ಬೇಕಿದೆ.
ಈ ಕುರಿತಾಗಿ ಸಾರ್ವಜನಿಕರಿಂದ ಹಲವು ಮನವಿಗಳು, ಮುಖ್ಯಮಂತ್ರಿಗಳಿಂದ, ಮಂತ್ರಿಗಳಿಂದ, ರಾಜ್ಯ ಸಭೆ ಸದಸ್ಯರಿಂದ, ವಿಧಾನಸಭೆ ಸದಸ್ಯರಿಂದ ಹಲವಾರು ಪತ್ರಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಉಪನಗರ ರೈಲು ಪ್ರಾರಂಭಿಸಿ, ಬೆಂಗಳೂರನ್ನು ಉಳಿಸುವ ಕಾಲ ಕೂಡಿಬಂದಿದೆ. ಬೆಂಗಳೂರು ಉಪನಗರ ರೈಲು ಯೋಜನೆಯ ಪ್ರಾರಂಭಿಕ ಕೆಲಸಗಳೆಲ್ಲ ಮುಗಿದಿವೆ. ಈಗ ಬಾಕಿ ಉಳಿದಿರುವುದೆಂದರೆ ನಿಮ್ಮ ಅನುಮತಿ ಮತ್ತು ಯೋಜನೆಯ ಚಾಲನೆಯಷ್ಟೆ.
ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಮಂತ್ರಾಲಯಕ್ಕೆ ಮಿಂಚೆ ಕಳುಹಿಸಲು ಇಲ್ಲಿ ಒತ್ತಿ