ಕಳೆದ ವರ್ಷದ ನಾಟಕಗಳು ಎಲ್ಲಾ ಮುಗಿದು ನಮ್ಮ ರಾಜಕಾರಣಿಗಳು ಮನೇಲಿ ಬೆಚ್ಚಗೆ ಕೂತಿರೋದರಿಂದ ಒಂದು ಲಾಭ ಅಂದರೆ, ಸಾರ್ವಜನಿಕ ಕೆಲಸಗಳಿಗೆ ಅಡ್ಡಗಾಲು ಹಾಕುವವರು ಕಮ್ಮಿಯಾಗಿ ಸುಮಾರು ಕೆಲಸಗಳು ಬೇಗ ಬೇಗ ಮುಗೀತಾ ಇವೆ. ಹಾಗೋ ಹೀಗೋ ಬಿಡಿಎ ನವರು ಒಂದಿಷ್ಟು underpassಗಳು ಮಾಡ್ತಾ ಇದಾರೆ, airport ಕೆಲಸ ಚೆನ್ನಾಗಿ ನಡೆದು, ಜಾಸ್ತಿ ಗಲಾಟೆ ಇಲ್ಲದೆ ಮುಗಿದಿದೆ. ಒಟ್ಟಿನಲ್ಲಿ ನಮ್ಮ ನಾಟಕದ ಕಂಪನಿಗಳು ಇಲ್ಲದೇ ಇದ್ದಾಗ ಕೆಲಸಗಳು ಸುಗಮವಾಗಿ ನಡಿತಾ ಇತ್ತು ಅನ್ನೊದಂತೂ ನಿಜ.
ಆದರೆ ಇನ್ನೇನು ಮತ್ತೊಂದು ಚುನಾವಣೆ ಬರಲಿದೆ, ಹಿಂದೆಲ್ಲಾ ನಮ್ಮನ್ನು ಆಳಿದ ಜನರನ್ನ ನಾಚಿಸೋವಂತ ಹಗಲುಗಳ್ಳರು ಚುನಾವಣೆಗೆ ನಿಲ್ಲಲಿದ್ದಾರೆ.
ವಿಶ್ವೇಶ್ವರ ಭಟ್ಟರ ಪ್ರಕಾರ "
ರಿಯಲ್ ಎಸ್ಟೇಟ್, ಗಣಿ ವ್ಯಾಪಾರಿಗಳು, ಗುತ್ತಿಗೆದಾರರು ಮೊದಲ ಬಾರಿಗೆ ಚುನಾವಣೆಯ ಲೆಕ್ಕಾಚಾರ, ಪಟ್ಟುಗಳನ್ನು ಬದಲಿಸಿಬಿಟ್ಟಿದ್ದಾರೆ. ಹಾಗೆ ನೋಡಿದರೆ ಈ ಸಲದ ಚುನಾವಣೆ ನಡೆಯುತ್ತಿರುವುದು ರಾಜಕೀಯ ಪಕ್ಷಗಳ ನಡುವೆ ಅಲ್ಲವೇ ಅಲ್ಲ. ರಾಜಕೀಯ ಪಕ್ಷಗಳ ಹೆಸರನ್ನು ಮಾತ್ರ ಬಳಸಿಕೊಳ್ಳುವ ರಿಯಲ್ ಎಸ್ಟೇಟ್ ಕುಳಗಳ ನಡುವಿನ ಹಣಾಹಣಿ ಇದು"
ಈ ಭೂಗಳ್ಳರು, ಹೆಗ್ಗಣಗಳು ಒಂದು ಕಡೆ ಆದರೆ, ಇನ್ನೊಂದು ಕಡೆ ಕನ್ನಡ ಧ್ವಜದ ನೆರಳಿನಲ್ಲಿ ರಾಜಕೀಯಕ್ಕೆ ನುಸುಳುತ್ತಿರುವ ಜನರೂ ಇದ್ದಾರೆ.
ಇಷ್ಟೆಲ್ಲಾ ಹಣ ಮತ್ತು ತೋಳು ಬಲ ಇರೋ ಜನರ ಎದುರು ಬೆಂಗಳೂರಿನ, ಕರ್ನಾಟಕದ ಬಗ್ಗೆ ನಿಜವಾದ ಕಾಳಜಿ ಇರೋ ಜನ ಆರಿಸಿ ಬರೋದು ಕಷ್ಟ ಅಲ್ವಾ? ಹಾಗಾದರೆ, ನಮ್ಮ ಊರಿನ, ನಮ್ಮ ರಾಜ್ಯ/ದೇಶದ ಅಭಿವೃದ್ಧಿ ಬಗ್ಗೆ ಕಾಳಜಿ ಇರೋ ನಾವೆಲ್ಲಾ ಏನು ಮಾಡಬೇಕು? ರಾಜಕಾರಣಿಗಳು ದುಡ್ಡು, ಭೂಮಿಗಾಗಿ ಹಾತೊರೆಯುತ್ತಿರುವಾಗ ನಮ್ಮ ಪಾಡಿಗೆ ನಾವು ನಮ್ಮೂರನ್ನ ಚೆನ್ನಾಗಿ ಮಾಡೋದು ಹೇಗೆ?
ನನ್ನ ಕಡೆಯಿಂದ ಒಂದಿಷ್ಟು ಉಪಾಯಗಳು:
೧. ಸರ್ಕಾರಿ ಅಧಿಕಾರಿಗಳ ಜೊತೆ ಸಹಕಾರ ಕೊಡೋದು: ಸರಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಸರಕಾರದ ಕೆಲಸ ಮಾಡೊ ಅಧಿಕಾರಿಗಳು ಅಲ್ಲೇ ಇರುತ್ತಾರೆ. ನಿಜ, ಹೆಚ್ಚಿನ ಅಧಿಕಾರಿಗಳು ತಮ್ಮನ್ನೇ ದುಡ್ಡಿಗೆ ಮಾರಿಕೊಂಡಿದ್ದಾರೆ, ಆದರೆ ಕೆಲವು ಒಳ್ಳೆ ಅಧಿಕಾರಿಗಳೂ ಇದ್ದಾರಲ್ಲ, ಅವರ ಜೊತೆ ಹೆಗಲುಗೂಡಿಸೋಣ.
೨. ನಮ್ಮ ಹಕ್ಕುಗಳನ್ನ ಉಪಯೋಗಿಸೋದು: RTI, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಇವೆಲ್ಲಾ ನಮ್ಮ ಹಕ್ಕುಗಳು. ಇವುಗಳನ್ನ ಸರಿಯಾಗಿ ಉಪಯೋಗಿಸಿದರೆ ಸಾಕಷ್ಟು ಅಕ್ರಮಗಳನ್ನ ತಡೆಗಟ್ಟಬಹುದು.
೩. ಜಾಗೃತಿ: ಪತ್ರಿಕೆಗಳಲ್ಲಿ, ಬ್ಲಾಗ್ ಮತ್ತು ವೆಬ್ ಸೈಟ್ ಗಳಲ್ಲಿ ನಮ್ಮ ಸಲಹೆಗಳ ಬಗ್ಗೆ, ನಡೆಯುತ್ತಿರೋ ಅಕ್ರಮಗಳ ಬಗ್ಗೆ ಬರೆಯೋದರಿಂದ ಮತ್ತಷ್ಟು ಜನರನ್ನು ಜಾಗೃತರನ್ನಾಗಿ ಮಾಡಬಹುದು. ಪ್ರಜೆಗಳಾದ ನಾವು ಪ್ರಜೆಗಳಿಗೆ ಏನು ಬೇಕು ಅನ್ನೋದರ ಬಗ್ಗೆ ಮಾತಾಡದೇ ಇದ್ದರೆ ಇನ್ಯಾರು ಮಾತಾಡ್ತಾರೆ?
ನಾವೆಲ್ಲಾ ಸೇರಿ ಮತ್ತೇನು ಮಾಡಬಹುದು? ನೀವೇನಂತೀರಾ ಸಾರ್ ?
ಪ್ರತಿಕ್ರಿಯೆಗಳು
Good stuff
shas3n, good stuff .. i really like the way you have compiled it.
Unfortunately , I don't have baraha at present ..certainly would like install and communicate in kannada
ನಿರಸ