ನಾವು ಯಾರು ಎಂದು ತಿಳಿಸಲು ಅತಿ ಸುಲಭ ಮಾರ್ಗ ಅಂದರೆ ಇಲ್ಲಿ ಒಂದು ಕನ್ನಡಿಯನ್ನು ಇಡುವುದು. ಆದರೆ ಅದನ್ನು ವೆಬ್ ಸೈಟ್ ಮೂಲಕ ಮಾಡಲು ಸಧ್ಯದಲ್ಲಿ ಸಾಧ್ಯವಿಲ್ಲದ್ದರಿಂದ, ಪ್ರಜಾ ಎಂದರೆ ನಾವು, ನೀವು ಮತ್ತೆಲ್ಲರೂ ಅಂತ ಮಾತ್ರ ಹೇಳಬಯಸುತ್ತೇವೆ. ನಿಮ್ಮಂತಹ, ನನ್ನಂತಹ ಜನರೆಲ್ಲಾ ಸೇರಿ ಪ್ರಜಾ ಜನ್ಮ ತಳೆದಿದೆ.
ಪ್ರಜಾ ಯಾರೊಬ್ಬರ ಸ್ವತ್ತೂ ಅಲ್ಲ ಮತ್ತು ಎಲ್ಲರ ಸ್ವತ್ತೂ ಹೌದು. ಪ್ರಜಾ ನಿಮ್ಮದು. ಪ್ರಜಾ ನಮ್ಮದು. ಇಲ್ಲಿ ಪ್ರಜಾ.inನ ಹಿಂದಿನ ಮೂಲಕಾರಣರಾದ ಜನರ ಹೆಸರನ್ನು ಹೇಳಿ ಪ್ರಜಾ.in ಯಾರೋ ಕೆಲವು ಜನರ ಆಸ್ಥಿ ಎಂಬಂತೆ ಮಾಡುವುದು ನಮ್ಮ ಉದ್ದೇಶವಲ್ಲ. ಹಾಗಾಗಿ ಪ್ರಜಾ.in ನ ಹಿಂದೆ ಈ ಎರಡು ರೀತಿಯ ಜನ ಇದ್ದಾರೆ ಎಂದು ಮಾತ್ರ ಹೇಳಬಯಸುತ್ತೇವೆ.
೧. ಬರಹಗಾರರು ಮತ್ತು ಉತ್ಸಾಹಿಗಳು: ಪ್ರಜಾ.in ನ ಎಲ್ಲ ಲೇಖನಗಳು, ಚರ್ಚೆಗಳು ಮುಂತಾದವುಗಳಿಗೆ ಇವರು ಜವಾಬ್ದಾರರು. ಬೆಂಗಳೂರಿನ ಬಗ್ಗಿನ ಬರಹಗಳನ್ನು ತಮ್ಮ ಸ್ವಂತ ಬ್ಲಾಗ್ ಗಳಿಂದ ಇಲ್ಲಿಗೆ ವರ್ಗಾಯಿಸಿ, ಇಲ್ಲಿಗೆ ಲೇಖನಗಳನ್ನು ಬರೆದು ಈ ವೆಬ್ ಸೈಟ್ ನ್ನು ಮಾಹಿತಿಯ ಆಗರವನ್ನಾಗಿ ಮಾಡಿದುವವರು. ನಿಮಗೆ ಬರಹಗಾರರಾಗಲು ಆಸಕ್ತಿ ಇದ್ದರೆ, ನಮ್ಮನ್ನು ಸಂಪರ್ಕಿಸಿ (Join as content creator ಆಯ್ಕೆಯನ್ನು ಉಪಯೋಗಿಸಿ). ನಿಮ್ಮ ಬರವಣಿಗೆಯ ಮಾದರಿಗಳನ್ನು ಜೊತೆಗೆ ಕಳುಹಿಸಿದರೆ ಅನುಕೂಲ.
೨. ತಂತ್ರಜ್ಙಾನಿಗಳು : ಈ ವೆಬ್ ಸೈಟ್ ನ ತಾಂತ್ರಿಕ ನಿರ್ವಹಣೆ, ಹೊಸ ಸೌಲಭ್ಯಗಳನ್ನು ಒದಗಿಸುವುದು ಇತ್ಯಾದಿಗಳಿಗೆ ಇವರು ಜವಾಬ್ದಾರರು. ಈ ನಿಟ್ಟಿನಲ್ಲಿ ನೀವು ಸಮರ್ಥರಾಗಿದ್ದು ನಮ್ಮ ಜೊತೆ ಕೈಗೂಡಿಸಬಯಸಿದರೆ, ನಮ್ಮನ್ನು ಸಂಪರ್ಕಿಸಿ (Join technical team ಆಯ್ಕೆಯನು ಬಳಸಿ).