Skip to Content

ಅರ್ಕಾವತಿ ಪುನಶ್ಚೇತನಕ್ಕೆ ಪ್ರಾಧಿಕಾರ- ಮುಖ್ಯಮಂತ್ರಿ

ಪುನಶ್ಚೇತನಕ್ಕೆ ಪ್ರಾಧಿಕಾರ ರಚಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ವಿಜಯ ಕರ್ನಾಟಕದಲ್ಲಿ ಪ್ರಕಟವಾದ "ಅರ್ಕಾವತಿ ಏಕೀ ದುರ್ಗತಿ?" ಲೇಖನ ಮಾಲಿಕೆಯ ಸಮಗ್ರ ಕೈಪಿಡಿಯನ್ನು ಸ್ವೀಕರಿಸಿ ಅವರು ಅರ್ಕಾವತಿ ನದಿ ಪುನಶ್ಚೇತನಕ್ಕೆ ಬದ್ಧ ಎಂದು ಹೇಳಿದ್ದಾರೆ. ನದಿ ಪುನಶ್ಚೇತನಕ್ಕಾಗಿ ಪ್ರತ್ಯೇಕ ಪ್ರಾಧಿಕಾರ ರಚಿಸುವ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ವಿಜಯ ಕರ್ನಾಟಕದಲ್ಲಿ ಪ್ರಕಟವಾದ ‘ಅರ್ಕಾವತಿ ಏಕೀ ದುರ್ಗತಿ?’ ಲೇಖನ ಮಾಲಿಕೆಯ ಸಮಗ್ರ ಕೈಪಿಡಿಯನ್ನು ಸ್ವೀಕರಿಸಿ ಗುರುವಾರ ಮಾತನಾಡಿದರು. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅರ್ಕಾವತಿ ನದಿ ಪುನಶ್ಚೇತನ ಅಗತ್ಯವಾಗಿದೆ. ಈ ಬಗ್ಗೆ ಪ್ರಾಧಿಕಾರ ಅಥವಾ ಸಮಿತಿ ರಚಿಸುವ ಬಗ್ಗೆ ಪರಿಶೀಲಿಸಲಾಗುವುದು. ಬೆಂಗಳೂರು ಜಲಮಂಡಳಿ ಹಾಗೂ ಜಲಸಂಪನ್ಮೂಲ ಖಾತೆ ಸಚಿವರು ನದಿ ಪುನಶ್ಚೇತನದ ಬಗ್ಗೆ ಇನ್ನು ೧೫ ದಿನಗಳಲ್ಲಿ ವರದಿ ನೀಡಲಿದ್ದು, ಆನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ರಾಜ್ಯದಾದ್ಯಂತ ಕೆರೆಗಳ ಸಂರಕ್ಷಣೆ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ನಗರದ ಕೆರೆಗಳನ್ನೂ ಅಭಿವೃದ್ಧಿಪಡಿಸಲು ಸರಕಾರ ಬದ್ಧವಾಗಿದೆ ಎಂದರು. ಅರ್ಕಾವತಿ ನದಿಯ ಮೂಲದಲ್ಲೇ ಒತ್ತುವರಿ ಆಗಿದೆ. ಹೆಸರಘಟ್ಟ ಜಲಾಶಯಕ್ಕೆ ನೀರು ಹರಿಯವುದೇ ದುಸ್ತರವಾಗಿದೆ. ನದಿ ಪಾತ್ರ ಹಾಗೂ ರಾಜಕಾಲುವೆಗಳನ್ನು ಆಕ್ರಮಿಸಿಕೊಳ್ಳಲಾಗಿದೆ. ನಂದಿಯಿಂದ ಹೆಸರಘಟ್ಟದವರೆಗಿನ ೪೮ ಕಿ.ಮೀ ನದಿ ಪಾತ್ರದಲ್ಲಿ ಎಂಟು ಕಿಮೀ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಉಳಿದದ್ದು ಇನ್ನು ೧೫ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ನಂತರ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಲಸಂಪನ್ಮೂಲ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಲೋಕೋಪಯೋಗಿ ಇಲಾಖೆ ಖಾತೆ ಸಚಿವ ಸಿ.ಎಂ. ಉದಾಸಿ ಹಾಜರಿದ್ದರು. ವಿಜಯ ಕರ್ನಾಟಕದಲ್ಲಿ ಪ್ರಕಟವಾದ ‘ಅರ್ಕಾವತಿ ಏಕೀ ದುರ್ಗತಿ’ ಲೇಖನ ಮಾಲಿಕೆಯ ಸಮಗ್ರ ಕೈಪಿಡಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರಿಕೆ ಸುದ್ದಿ ಸಂಪಾದಕ ವಸಂತ ನಾಡಿಗೇರ್ ನೀಡಿದರು. ಸಚಿವರಾದ ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ, ಪತ್ರಿಕೆ ಮುಖ್ಯ ವರದಿಗಾರ ಪಿ. ತ್ಯಾಗರಾಜ್, ಹಿರಿಯ ವರದಿಗಾರ ಆರ್. ಮಂಜುನಾಥ್ ಉಪಸ್ಥಿತರಿದ್ದರು. http://keremanju.blogspot... http://www.arkavathi.com

Praja.in comment guidelines

Posting Guidelines apply for comments as well. No foul language, hate mongering or personal attacks. If criticizing third person or an authority, you must be fact based, as constructive as possible, and use gentle words. Avoid going off-topic no matter how nice your comment is. Moderators reserve the right to either edit or simply delete comments that don't meet these guidelines. If you are nice enough to realize you violated the guidelines, please save Moderators some time by editing and fixing yourself. Thanks!about seo | forum